ನೆಚ್ಚಿನ ಯಕ್ಷ ಪ್ರೇಮಿಗಳೇ,
ಯಕ್ಷಸಂಘಟನಾಕೋಶದ ಮೊದಲ ಕರಡು ಲೋಕಾರ್ಪಣಗೊಳ್ಳುತ್ತಿದೆ.
ಯಕ್ಷಸಂಘಟನಾಕೊಶವು ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳನ್ನು ಗುರುತಿಸಿಸುವುದಲ್ಲದೇ, ಕ್ರಮೇಣ ಈ ಎಲ್ಲಾ ಸಂಘಟನೆಗಳ ಕುರಿತಾದ ವಿವರಗಳನ್ನು ಬೇರೆಬೇರೆ ದಸ್ತಾವೇಜುಗಳ ಮೂಲಕ ಕೋಶದಲ್ಲಿ ಪೋಣಿಸುವ ಇರಾದೆಯಲ್ಲಿದೆ. ಸರಕಾರದ ಇಲಾಖೆ, ಅಕಾಡೆಮಿ, ನೋಂದಣಿತ ಪ್ರತಿಷ್ಠಾನಗಳು, ಮೇಳಗಳು, ಸಂಘಗಳು, ಕೂಟಗಳು, ಉದ್ಯಮಗಳು, ವಾಟ್ಸ್ಯಾಪ್ ಇತ್ಯಾದಿ ಸಾಮಾಜಿಕ ತಾಣಗಳ ಮೂಲಕ ಸಂಘಟಿತ ಸಮೂಹಗಳು ಹೀಗೆ ಎಲ್ಲಾ ರೀತಿಯ ದೊಡ್ಡ ಹಾಗೂ ಸಣ್ಣ, ಆಧಿಕೃತ ಹಾಗೂ ಅನಧಿಕೃತ ಸಂಘಟನೆಗಳೆಲ್ಲವನ್ನೂ ಗುರುತಿಸಿ ಪರಿಚಯಿಸುವುದು ಈ ಯೋಜನೆಯ ಉದ್ದೇಶ. ಸಮಕಾಲೀನ ಸಂಘಟನೆಗಳಲ್ಲದೇ, ಈಗ ಅಸ್ತಿತ್ವದಲ್ಲಿರದ, ಆದರೆ ಹಿಂದೆ ಮೆರೆದು ಹೋದ ಸಂಘಟನೆಗಳನ್ನೂ ಗುರುತಿಸುವ ಆಶಯ. ಈ ಯೋಜನೆಯಲ್ಲಿ ಕ್ರಮೇಣ ೫,೦೦೦ಕ್ಕೂ ಮಿಕ್ಕಿದ ಸಂಘಟನೆಗಳನ್ನು ಗುರುತಿಸುವ ಉತ್ಸಾಹದಲ್ಲಿದ್ದೇವೆ. ಈ ಮೊದಲ ಕರಡಿನಲ್ಲಿ ಸುಮಾರು ೧,೧೦೦ ಸಂಘಟನೆಗಳನ್ನು ಕಲೆಹಾಕಿದ್ದೇವೆ. ಅಖಿಲ ಕರ್ನಾಟಕದ ಎಲ್ಲಾ ಯಕ್ಷಗಾನ ಪ್ರಕಾರಗಳನ್ನೂ, ಪ್ರಭೇಧಗಳನ್ನು ಪರಿಗಣಿಸುವುದಲ್ಲದೇ, ನಾಡಿನ ಹೊರಗಿನ, ವಿದೇಶಗಳಲ್ಲಿನ ಸಂಘಟನೆಗಳನ್ನೂ ಗುರುತಿಸಲಿದ್ದೇವೆ.
ಯಕ್ಷಸಂಘಟನಾಕೋಶ ಯೋಜನೆಯು ಯಕ್ಷಪ್ರಸಂಗಕೋಶ ಯಾ ಪ್ರಸಂಗಪ್ರತಿಸಂಗ್ರಹ ಯೋಜನೆಗಳಂತೆ ಎರಡು ಸ್ತರದಲ್ಲಿ ದಾಖಲೀಕರಣವನ್ನು ಅನಾವರಣಗೊಳಿಸುತ್ತದೆ. ಯಕ್ಷ ಸಂಘಟನೆಗಳ ಕೋಷ್ಟಕವು ಸಂಘಟನೆಗಳನ್ನು ಸಂಸ್ಥೆಯ ಹೆಸರಿನ ಸರತಿಯಲ್ಲಿ ಪ್ರತೀ ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯೊಂದಿಗೆ ಗುರುತಿಸಿದರೆ, ಇಲ್ಲಿ ಕೊಟ್ಟಿರುವ ಕೊಂಡಿಯನ್ನು ಒತ್ತಿದರೆ ಆ ಸಂಸ್ಥೆಯ ವಿವರವಾದ ಮಾಹಿತಿ ತುಂಬಿದ ದಸ್ತಾವೇಜು ಅನಾವರಣಗೊಂಡು, ಅದನ್ನು ಇಳಿಸಿಕೊಂಡು ಉಳಿಸಿಕೊಳ್ಳಬಹುದಾಗಿದೆ.
ಯಕ್ಷಸಂಘಟನಾ ಕೋಶವನ್ನು ಬೆಳೆಸಲು ಎರಡು ನಿಟ್ಟಿನ ಪ್ರಯತ್ನಗಳು ಸಮಾನಾಂತರವಾಗಿ ಸಾಗಬೇಕಾಗಿದೆ. ಒಂದು ನಿಟ್ಟಿನಲ್ಲಿ ಸಂಘಟನೆಯ ಸಂಕ್ಷಿಪ್ತ ಮಾಹಿತಿಯನ್ನು ಕೋಷ್ಟಕದಲ್ಲಿ ತುಂಬುತ್ತಾ ಹೋಗಬೇಕಾಗಿದೆ, ಇನ್ನೊಂದೆಡೆ ಪ್ರತೀ ಸಂಘಟನೆಯ ವಿವರವಾದ ಮಾಹಿತಿಯ ದಸ್ತಾವೇಜು ತಯಾರಾಗಿ ಕೊಂಡಿಯ ರೂಪದಲ್ಲಿ ಕೋಷ್ಟಕವನ್ನು ಸೇರಬೇಕಾಗಿದೆ ಈ ಎರಡೂ ಕೆಲಸವನ್ನು ಯಕ್ಷ ಪ್ರೇಮಿಗಳ ಪ್ರಯತ್ನಗಳ ಮೂಲಕ ಫಲಪ್ರದವಾಗಬೇಕಾಗಿದೆ.
ಯಕ್ಷಸಂಘಟನಾ ಕೋಶದ ಕೋಷ್ಠಕಕ್ಕಾಗಿ ಈ ಕೆಳಗಿನಕೊಂಡಿಯನ್ನು ಒತ್ತಿ https://drive.google.com/file/d/1aRwnuAljFG186h2McEUBhPuTODJVeLOq/view
ಉದಾಹರಣೆಯಾಗಿ ಯಕ್ಷವಾಹಿನಿ ಸಂಸ್ಥೆಯ ವಿವರವಾದ ಮಾಹಿತಿಯ ದಸ್ತಾವೇಜಿನ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ ಇದೇ ಕೊಂಡಿಯನ್ನು ಕೋಷ್ಟಕದಲ್ಲಿ ಯಕ್ಷವಾಹಿನಿಯ ಸಂಕ್ಷಿಪ್ತ ಮಾಹಿತಿಯ ಭಾಗವಾಗಿಯೂ ಕೊಡಲಾಗಿದೆ
https://drive.google.com/open?id=15s2IkqX3fsl71kKzAYOrH-xVUQ6_NGxP
ನಿಮಗೆ ಸಂಬಂಧಿಸಿದ ಯಕ್ಷಸಂಘನೆಯ ಕುರಿತಾದ ಮಾಹಿತಿಯನ್ನು ತುಂಬಲು ಕೆಳಗೆ ಕೊಟ್ಟಿರುವ ದಸ್ತಾವೇಜು ಮಾದರಿಯನ್ನು ಉಪಯೋಗಿಸಿ
https://drive.google.com/open?id=1JTNsqHmFmLAI6_4UOUjAWoFGh55QXjJZ
ಮೇಲೆ ತೋರಿಸಿದ MSWORD ನಮೂನೆಯಲ್ಲಿ ಮಾಹಿತಿ ತುಂಬಿಸಿ ಕಳಿಸಿ; ಇಲ್ಲವಾದರೆ ತಮಗೆ ತಿಳಿದ ಸಂಘನೆಯ ವಿವರಗಳನ್ನು ವಾಟ್ಸಪ್/ಫೋನ್ ಅಥವಾ ಇಮೇಲ್ ನಲ್ಲಿ ನಮಗೆ ನೇರವಾಗಿ ತಿಳಿಸಿ.
Whatsapp/Phone: 94483 53910 (Umesh Shiroor)
Email: yakshasanghatana@gmail.com
ನೀವು ಕೆಳಕಂಡ ರೀತಿಯಲ್ಲಿ ನಮಗೆ ಸಹಕರಿಸಬಹುದಾಗಿದೆ:
1. ಈಗ ಕೋಷ್ಟಕದಲ್ಲಿ ಕೊಟ್ಟಿರುವ ಸಂಸ್ಥೆಯ ದಸ್ತಾವೇಜು ತಯಾರಿಸಲು ನಮಗೆ ವಿವರಗಳನ್ನು ಒದಗಿಸಿ ಕೊಡಿ. ಸಂಕ್ಷಿಪ್ತ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಕೊಡಲಾಗಿದೆ. ತಪ್ಪು ಮಾಹಿತಿ (ಉದಾಹರಣೆ ತಿಟ್ಟು ಪಾಯ ಮುಖ್ಯ ಕೇಂದ್ರ ಇತ್ಯಾದಿ ) ಇದ್ದರೆ ಕೂಡಲೇ ತಿಳಿಸಿ, ಸರಿಪಡಿಸಲಾಗುವುದು.
2. ನಿಮಗೆ ತಿಳಿದ ಸಂಸ್ಥೆಗಳ ಮಾಹಿತಿಯನ್ನು ನಮಗೆ ವಾಟ್ಸಾಪ್ ಮೂಲಕ ತಲುಪಿಸಿ, ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ವ್ಯಕ್ತಿಗಳ ಸಂಪರ್ಕ ಮಾಹಿತಿಯನ್ನು ಕೊಡಿಸಿ, ನಮ್ಮ ಈ ಕಾರ್ಯಕ್ಕೆ ಬೆಂಬಲ ಕೊಡಿ.
3. ನಿಮ್ಮ ಯಕ್ಷಾಭಿಮಾನಿ ಸ್ನೇಹಿತರಿಗೆ ವಾಟ್ಸಪ್ಪ್ ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂದೇಶವನ್ನು ತಲುಪಿಸಿ ಅವರಿಂದ ಸಂಘಟನಾ ಕೋಶದ ಮಾಹಿತಿ ಪಡೆಯಲು ಸಹಕರಿಸಿ.
ಧನ್ಯವಾದಗಳು
ಉಮೇಶ ಶಿರೂರು, ಸಂಚಾಲಕರು, ಯಕ್ಷಸಂಘಟನಾಕೋಶ ಯೋಜನೆ, ಯಕ್ಷವಾಹಿನಿ (ರಿ)
ಯಕ್ಷವಾಹಿನಿ (ರಿ) ಆಡಳಿತ ಮಂಡಳಿ
If you win actual money you'll be able to|you presumably can} take it out or apply it to another game. At Free Daily Spins we take each precaution to ensure that you could take pleasure in your day by day free video games safely and securely. We are 다파벳 committed to responsible gambling which is why we're a part of} the GamStop community.
ReplyDelete