Saturday, June 11, 2022

ಸಾವಿರಕ್ಕೂ ಮಿಕ್ಕಿದ ಸಂಘಟನೆಗಳ ಯಾದಿಯೊಂದಿಗೆ ಯಕ್ಷಸಂಘಟನಾಕೋಶದ ಮೊದಲ ಕರಡು ಲೋಕಾರ್ಪಣೆಗೊಳ್ಳುತ್ತಿದೆ; ೫,೦೦೦ಕ್ಕೂ ಮಿಕ್ಕಿದ ಯಕ್ಷಸಂಘಟನೆಗಳನ್ನು ಇಲ್ಲಿ ಗುರುತಿಸಲು ನಿಮ್ಮ ಸಹಕಾರ ಬೇಕಿದೆ!



ನೆಚ್ಚಿನ ಯಕ್ಷ ಪ್ರೇಮಿಗಳೇ,

 

ಕ್ಷಸಂಘಟನಾಕೋಶದ ಮೊದಲ ಕರಡು ಲೋಕಾರ್ಪಣಗೊಳ್ಳುತ್ತಿದೆ.  

 

ಯಕ್ಷಸಂಘಟನಾಕೊಶವು ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳನ್ನು ಗುರುತಿಸಿಸುವುದಲ್ಲದೇ, ಕ್ರಮೇಣ ಈ ಎಲ್ಲಾ ಸಂಘಟನೆಗಳ ಕುರಿತಾದ ವಿವರಗಳನ್ನು ಬೇರೆಬೇರೆ ದಸ್ತಾವೇಜುಗಳ ಮೂಲಕ ಕೋಶದಲ್ಲಿ ಪೋಣಿಸುವ ಇರಾದೆಯಲ್ಲಿದೆ. ಸರಕಾರದ ಇಲಾಖೆ, ಅಕಾಡೆಮಿ, ನೋಂದಣಿತ ಪ್ರತಿಷ್ಠಾನಗಳು, ಮೇಳಗಳು, ಸಂಘಗಳು, ಕೂಟಗಳು, ಉದ್ಯಮಗಳು, ವಾಟ್ಸ್ಯಾಪ್‌  ಇತ್ಯಾದಿ ಸಾಮಾಜಿಕ ತಾಣಗಳ ಮೂಲಕ  ಸಂಘಟಿತ ಸಮೂಹಗಳು ಹೀಗೆ ಎಲ್ಲಾ ರೀತಿಯ ದೊಡ್ಡ ಹಾಗೂ ಸಣ್ಣ, ಆಧಿಕೃತ ಹಾಗೂ ಅನಧಿಕೃತ ಸಂಘಟನೆಗಳೆಲ್ಲವನ್ನೂ ಗುರುತಿಸಿ ಪರಿಚಯಿಸುವುದು ಈ ಯೋಜನೆಯ ಉದ್ದೇಶ. ಸಮಕಾಲೀನ ಸಂಘಟನೆಗಳಲ್ಲದೇ, ಈಗ ಅಸ್ತಿತ್ವದಲ್ಲಿರದ, ಆದರೆ ಹಿಂದೆ ಮೆರೆದು ಹೋದ ಸಂಘಟನೆಗಳನ್ನೂ ಗುರುತಿಸುವ ಆಶಯ. ಈ ಯೋಜನೆಯಲ್ಲಿ ಕ್ರಮೇಣ ೫,೦೦೦ಕ್ಕೂ ಮಿಕ್ಕಿದ ಸಂಘಟನೆಗಳನ್ನು ಗುರುತಿಸುವ ಉತ್ಸಾಹದಲ್ಲಿದ್ದೇವೆ. ಈ ಮೊದಲ ಕರಡಿನಲ್ಲಿ ಸುಮಾರು ೧,೧೦೦ ಸಂಘಟನೆಗಳನ್ನು ಕಲೆಹಾಕಿದ್ದೇವೆ.  ಅಖಿಲ ಕರ್ನಾಟಕದ ಎಲ್ಲಾ ಯಕ್ಷಗಾನ ಪ್ರಕಾರಗಳನ್ನೂ, ಪ್ರಭೇಧಗಳನ್ನು ಪರಿಗಣಿಸುವುದಲ್ಲದೇ, ನಾಡಿನ ಹೊರಗಿನ, ವಿದೇಶಗಳಲ್ಲಿನ ಸಂಘಟನೆಗಳನ್ನೂ ಗುರುತಿಸಲಿದ್ದೇವೆ.

 

 ಯಕ್ಷಸಂಘಟನಾಕೋಶ  ಯೋಜನೆಯು ಯಕ್ಷಪ್ರಸಂಗಕೋಶ ಯಾ ಪ್ರಸಂಗಪ್ರತಿಸಂಗ್ರಹ ಯೋಜನೆಗಳಂತೆ ಎರಡು ಸ್ತರದಲ್ಲಿ ದಾಖಲೀಕರಣವನ್ನು ಅನಾವರಣಗೊಳಿಸುತ್ತದೆ. ಯಕ್ಷ ಸಂಘಟನೆಗಳ ಕೋಷ್ಟಕವು ಸಂಘಟನೆಗಳನ್ನು ಸಂಸ್ಥೆಯ ಹೆಸರಿನ ಸರತಿಯಲ್ಲಿ ಪ್ರತೀ ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯೊಂದಿಗೆ ಗುರುತಿಸಿದರೆ, ಇಲ್ಲಿ ಕೊಟ್ಟಿರುವ ಕೊಂಡಿಯನ್ನು  ಒತ್ತಿದರೆ  ಸಂಸ್ಥೆಯ  ವಿವರವಾದ ಮಾಹಿತಿ ತುಂಬಿದ ದಸ್ತಾವೇಜು ಅನಾವರಣಗೊಂಡು, ಅದನ್ನು  ಇಳಿಸಿಕೊಂಡು ಉಳಿಸಿಕೊಳ್ಳಬಹುದಾಗಿದೆ.

 

ಯಕ್ಷಸಂಘಟನಾ ಕೋಶವನ್ನು ಬೆಳೆಸಲು ಎರಡು ನಿಟ್ಟಿನ ಪ್ರಯತ್ನಗಳು ಸಮಾನಾಂತರವಾಗಿ ಸಾಗಬೇಕಾಗಿದೆ. ಒಂದು ನಿಟ್ಟಿನಲ್ಲಿ ಸಂಘಟನೆಯ ಸಂಕ್ಷಿಪ್ತ ಮಾಹಿತಿಯನ್ನು ಕೋಷ್ಟಕದಲ್ಲಿ ತುಂಬುತ್ತಾ ಹೋಗಬೇಕಾಗಿದೆ, ಇನ್ನೊಂದೆಡೆ ಪ್ರತೀ ಸಂಘಟನೆಯ ವಿವರವಾದ ಮಾಹಿತಿಯ ದಸ್ತಾವೇಜು ತಯಾರಾಗಿ ಕೊಂಡಿಯ ರೂಪದಲ್ಲಿ ಕೋಷ್ಟಕವನ್ನು ಸೇರಬೇಕಾಗಿದೆ   ಎರಡೂ ಕೆಲಸವನ್ನು ಯಕ್ಷ ಪ್ರೇಮಿಗಳ ಪ್ರಯತ್ನಗಳ ಮೂಲಕ ಫಲಪ್ರದವಾಗಬೇಕಾಗಿದೆ.

 

 ಯಕ್ಷಸಂಘಟನಾ ಕೋಶದ ಕೋಷ್ಠಕಕ್ಕಾಗಿ  ಕೆಳಗಿನಕೊಂಡಿಯನ್ನು ಒತ್ತಿ  https://drive.google.com/file/d/1aRwnuAljFG186h2McEUBhPuTODJVeLOq/view

 

ಉದಾಹರಣೆಯಾಗಿ ಯಕ್ಷವಾಹಿನಿ ಸಂಸ್ಥೆಯ ವಿವರವಾದ ಮಾಹಿತಿಯ ದಸ್ತಾವೇಜಿನ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ ಇದೇ ಕೊಂಡಿಯನ್ನು ಕೋಷ್ಟಕದಲ್ಲಿ ಯಕ್ಷವಾಹಿನಿಯ ಸಂಕ್ಷಿಪ್ತ ಮಾಹಿತಿಯ ಭಾಗವಾಗಿಯೂ ಕೊಡಲಾಗಿದೆ  

https://drive.google.com/open?id=15s2IkqX3fsl71kKzAYOrH-xVUQ6_NGxP

 

 

ನಿಮಗೆ ಸಂಬಂಧಿಸಿದ ಯಕ್ಷಸಂಘನೆಯ ಕುರಿತಾದ ಮಾಹಿತಿಯನ್ನು ತುಂಬಲು ಕೆಳಗೆ ಕೊಟ್ಟಿರುವ ದಸ್ತಾವೇಜು ಮಾದರಿಯನ್ನು ಉಪಯೋಗಿಸಿ 

 

https://drive.google.com/open?id=1JTNsqHmFmLAI6_4UOUjAWoFGh55QXjJZ

 

ಮೇಲೆ ತೋರಿಸಿದ MSWORD ನಮೂನೆಯಲ್ಲಿ ಮಾಹಿತಿ  ತುಂಬಿಸಿ ಕಳಿಸಿ; ಇಲ್ಲವಾದರೆ ತಮಗೆ ತಿಳಿದ ಸಂಘನೆಯ ವಿವರಗಳನ್ನು  ವಾಟ್ಸಪ್/ಫೋನ್ ಅಥವಾ ಇಮೇಲ್ ನಲ್ಲಿ ನಮಗೆ ನೇರವಾಗಿ ತಿಳಿಸಿ.

 

Whatsapp/Phone: 94483 53910 (Umesh Shiroor)

Email: yakshasanghatana@gmail.com

 

ನೀವು ಕೆಳಕಂಡ ರೀತಿಯಲ್ಲಿ ನಮಗೆ ಸಹಕರಿಸಬಹುದಾಗಿದೆ:

 

1. ಈಗ ಕೋಷ್ಟಕದಲ್ಲಿ ಕೊಟ್ಟಿರುವ ಸಂಸ್ಥೆ  ದಸ್ತಾವೇಜು ತಯಾರಿಸಲು ನಮಗೆ ವಿವರಗಳನ್ನು ಒದಗಿಸಿ ಕೊಡಿ.  ಸಂಕ್ಷಿಪ್ತ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಕೊಡಲಾಗಿದೆ. ತಪ್ಪು ಮಾಹಿತಿ (ಉದಾಹರಣೆ  ತಿಟ್ಟು ಪಾಯ  ಮುಖ್ಯ ಕೇಂದ್ರ ಇತ್ಯಾದಿ ) ಇದ್ದರೆ ಕೂಡಲೇ ತಿಳಿಸಿ, ಸರಿಪಡಿಸಲಾಗುವುದು.

 

2. ನಿಮಗೆ ತಿಳಿದ ಸಂಸ್ಥೆಗಳ ಮಾಹಿತಿಯನ್ನು ನಮಗೆ ವಾಟ್ಸಾಪ್ ಮೂಲಕ ತಲುಪಿಸಿ, ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ  ವ್ಯಕ್ತಿಗಳ ಸಂಪರ್ಕ ಮಾಹಿತಿಯನ್ನು ಕೊಡಿಸಿ,  ನಮ್ಮ  ಕಾರ್ಯಕ್ಕೆ ಬೆಂಬಲ ಕೊಡಿ.

 

3. ನಿಮ್ಮ  ಯಕ್ಷಾಭಿಮಾನಿ ಸ್ನೇಹಿತರಿಗೆ  ವಾಟ್ಸಪ್ಪ್ ಫೇಸ್ಬುಕ್ ಮೊದಲಾದ ಸಾಮಾಜಿಕ  ಜಾಲತಾಣಗಳ ಮೂಲಕ   ಸಂದೇಶವನ್ನು ತಲುಪಿಸಿ ಅವರಿಂದ ಸಂಘಟನಾ ಕೋಶದ ಮಾಹಿತಿ ಪಡೆಯಲು ಸಹಕರಿಸಿ.

 

ಧನ್ಯವಾದಗಳು  

 

ಮೇಶ ಶಿರೂರು, ಸಂಚಾಲಕರು, ಯಕ್ಷಸಂಘಟನಾಕೋಶ ಯೋಜನೆ, ಯಕ್ಷವಾಹಿನಿ (ರಿ)

ಯಕ್ಷವಾಹಿನಿ (ರಿ) ಆಡಳಿತ ಮಂಡಳಿ





Saturday, January 25, 2020

“ಯಕ್ಷಸಂಘಟನಾಕೋಶ” ಯೋಜನೆಯ ಲೋಕಾರ್ಪಣೆ!


ನೆಚ್ಚಿನ ಯಕ್ಷಪ್ರೇಮಿಗಳೇ,

ಯಕ್ಷವಾಹಿನಿ ಸಮೂಹ ಮತ್ತು ಸಂಸ್ಥೆಯ ನಾಲ್ಕನೇ ಯೋಜನೆಯಾದ “ಯಕ್ಷಸಂಘಟನಾಕೋಶ”ವು ಈ ಮೂಲಕ ಲೋಕಾರ್ಪಣೆಯಾಗುತ್ತಿದೆ. ಈಗಾಗಲೇ ಚಾಲನೆಯಲ್ಲಿರುವ ಯೋಜನೆಗಳಾದ ಯಕ್ಷಪ್ರಸಂಗಕೋಶ, ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಯಾದಿ ಯೋಜನೆಗಳ ಜೊತೆಜೊತೆಯಲ್ಲೇ  ಯಕ್ಷಪ್ರೇಮಿಗಳ ಕೊಡುಗೆಯಲ್ಲೇ ಬೆಳೆಯಬೇಕಾದ ಇನ್ನೊಂದು ಶಿಶು ಇದು, ದಯವಿಟ್ಟು ದತ್ತು ತೆಗೆದುಕೊಂಡು ಸಾಕಿ ಬೆಳೆಸಿ.

ಯಕ್ಷಸಂಘಟನಾಕೋಶವು ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲಾ ಸಣ್ಣ ಹಾಗೂ ದೊಡ್ಡ ಸಂಘಟನೆಗಳ ಹಾಗೂ ಸಂಸ್ಥೆಗಳ ಕುರಿತಾಗಿ ಆಮೂಲಾಗ್ರವಾಗಿ ಅಂತರಜಾಲದಲ್ಲಿ ದಾಖಲೀಕರಿಸಲು ಹೊರಟಿದೆ.  ಈ ಸಂಘಟನೆಗಳು ವ್ಯಾವಸಾಯಿಕ / ಹರಕೆ / ಹವ್ಯಾಸಿ ಮೇಳಗಳಿರಬಹುದು, ಪ್ರತಿಷ್ಠಾನಗಳಿರಬಹುದು, ಖಾಸಗಿ ಉದ್ಯಮವಿರಬಹುದು, ಸಾರ್ವಜನಿಕವಾದ ಯಾ ಸರಕಾರೀ ಸ್ವಾಮ್ಯದ ಒಕ್ಕೂಟವೂ ಆಗಿರಬಹುದು. ಸಮಕಾಲೀನ ಹಾಗೂ ಚಾರಿತ್ರಿಕವಾಗಿ ಮೆರೆದು ಅಳಿದು ಹೋದ ೩,೦೦೦ದಿಂದ ೫,೦೦೦ದವರೆಗೆ ಇರಬಹುದಾದ ಸಂಘಟನೆಗಳೆಲ್ಲವನ್ನೂ ದಾಖಲೀಕರಿಸುವ ಉದ್ದೇಶ ನಮ್ಮದು. ಯಕ್ಷವಾಹಿನಿಯ ಎಲ್ಲಾ ಯೋಜನೆಗಳು ಸಮಗ್ರ ಕರ್ನಾಟಕದ ಯಕ್ಷಗಾನದ ಎಲ್ಲಾ ಪಾಯಗಳನ್ನು ಹಾಗೂ ತಿಟ್ಟುಗಳನ್ನು ಗಮನಿಸುವುದರಿಂದ ಈ ಯೋಜನೆಯೂ ಅದನ್ನೇ ಅನುಸರಿಸುವದಲ್ಲದೇ ರಾಜ್ಯ, ದೇಶಗಳ ಗಡಿ ಮೀರಿ ಅಂತರರಾಷ್ಟ್ರೀಯ ಸಂಘಟನೆಗಳನ್ನೂ ದಾಖಲೀಕರಿಸಿ ವಿಶ್ವಗಾನವಾಗುತ್ತಿರುವ ಯಕ್ಷಗಾನಕ್ಕೆ ತಕ್ಕ ನ್ಯಾಯ ಸಲ್ಲಿಸುವ ತವಕದಲ್ಲಿದೆ.

ಯಕ್ಷಸಂಘಟನಾಕೋಶ ಯೋಜನೆಯು ಯಕ್ಷಪ್ರಸಂಗಕೋಶ ಯಾ ಪ್ರಸಂಗಪ್ರತಿಸಂಗ್ರಹ ಯೋಜನೆಗಳಂತೆಯೇ ಎರಡು ಸ್ತರದಲ್ಲಿ ದಾಖಲೀಕರಣವನ್ನು ಅನಾವರಣಗೊಳಿಸುತ್ತದೆ. ಯಕ್ಷಸಂಘಟನೆಗಳ ಕೋಷ್ಟಕವು ಸಂಘಟನೆಗಳನ್ನು ಸಂಸ್ಥೆಯ  ಹೆಸರಿನ ಸರತಿಯಲ್ಲಿ ಪ್ರತೀ ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತಾ ಹೋಗುತ್ತದೆ. ಈ ಸಂಕ್ಷಿಪ್ತ ಮಾಹಿತಿಯ ಸಾಲಿನಲ್ಲಿ ಕೊಟ್ಟಿರುವ ಕೊಂಡಿಯನ್ನು ಒತ್ತಿದರೆ, ಆ ಸಂಸ್ಥೆಯ ವಿವರವಾದ ಮಾಹಿತಿ ತುಂಬಿದ ದಸ್ತಾವೇಜು ಅನಾವರಣಗೊಂಡು ಆ ದಸ್ತಾವೇಜನ್ನು ಯಾರು ಬೇಕಾದರೂ ಇಳಿಸಿಕೊಂಡು ಉಳಿಸಿಕೊಳ್ಳಬಹುದಾಗಿದೆ.

ಕೋಷ್ಟಕ ಹಾಗೂ ಸಂಘಟನಾ ವಿವರದ ಮಾಹಿತಿಯ ದಸ್ತಾವೇಜು ಎರಡರಲ್ಲೂ ಆಯಾ ದಸ್ತಾವೇಜಿಗೆ ಸಂಬಂಧಿಸಿದ ಅಂತರಜಾಲ ಕೊಂಡಿಯನ್ನು ಕೊಡುವುದರಿಂದ, ಆ ಕೊಂಡಿಯನ್ನು ಒತ್ತಿಕೊಂಡು ಹಳೆಯ ಆವೃತ್ತಿಯ ದಸ್ತಾವೇಜಿನ ಮೂಲಕವೇ ತೀರಾ ಇತ್ತೀಚಿನ ಆವೃತ್ತಿಯನ್ನು ಇಳಿಸಿಕೊಳ್ಳಲು ಅನುಕೂಲಮಾಡಿಕೊಡಲಾಗಿದೆ.

ಯಕ್ಷಸಂಘಟನಾಕೋಶವನ್ನು ಬೆಳೆಸಲು ಎರಡು ನಿಟ್ಟಿನ ಪ್ರಯತ್ನಗಳು ಸಮಾನಾಂತರವಾಗಿ ಸಾಗಬೇಕಾಗಿದೆ.  ಒಂದು ನಿಟ್ಟಿನಲ್ಲಿ ಸಂಘಟನೆಯ ಸಂಕ್ಷಿಪ್ತ ಮಾಹಿತಿಯು ಕೋಷ್ಟಕದಲ್ಲಿ ತುಂಬುತ್ತಾ ಹೋಗಬೇಕಾಗಿದೆ, ಇನ್ನೊಂದೆಡೆ, ಪ್ರತೀ ಸಂಘಟನೆಯ ಕುರಿತಾದ ವಿವರವಾದ ಮಾಹಿತಿಯ ದಸ್ತಾವೇಜು ತಯಾರಾಗಿ, ಕೊಂಡಿಯ ರೂಪದಲ್ಲಿ ಕೋಷ್ಟಕವನ್ನು ಸೇರಬೇಕಾಗಿದೆ. ಈ ಎರಡೂ ಕೆಲಸಗಳು ಯಕ್ಷಪ್ರೇಮಿಗಳ crowd sourcing ಪ್ರಯತ್ನಗಳ ಮೂಲಕ ಫಲಪ್ರದವಾಗಬೇಕಾಗಿದೆ.

ಯಕ್ಷಸಂಘಟನಾಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.


ಉದಾಹರಣೆಯಾಗಿ “ಯಕ್ಷವಾಹಿನಿ” ಸಂಸ್ಥೆಯ ವಿವರವಾದ ಮಾಹಿತಿಯ ದಸ್ತಾವೇಜಿನ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ. ಇದೇ ಕೊಂಡಿಯನ್ನು ಕೋಷ್ಟಕದಲ್ಲಿ ಯಕ್ಷವಾಹಿನಿ ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯ ಭಾಗವಾಗಿಯೂ ಕೊಡಲಾಗಿದೆ.


ನಿಮಗೆ ಸಂಬಂಧಿಸಿದ ಯಕ್ಷಸಂಘಟನೆಯ ಕುರಿತಾದ ಮಾಹಿತಿಯನ್ನು ತುಂಬಲು ಕೆಳಗೆ ಕೊಟ್ಟಿರುವ ದಸ್ತಾವೇಜು ಮಾದರಿಯನ್ನು ಉಪಯೋಗಿಸಿ.


ಸಾಧ್ಯವಾದರೆ ಮೇಲೆ ತೋರಿಸಿದ  MS Word ನಮೂನೆಯಲ್ಲೇ ಈ ಮಾದರಿಯ ದಸ್ತಾವೇಜನ್ನು ತುಂಬಿಸಿ ಕಳುಹಿಸಿ, ಇಲ್ಲವಾದರೆ ಕೆಳಗೆ ತೋರಿಸಿದ ಪಿಡಿಎಫ್ ಮಾದರಿಯಲ್ಲಿ ತೋರಿಸಿದ ತಲೆಬರೆಹಗಳನ್ನು ನಮೂದಿಸಿ ಅವುಗಳ ಕೆಳಗೆ ವಿವರವಾದ ಮಾಹಿತಿಯನ್ನು ಬರೆದು ವಾಟ್ಸ್ಯಾಪ್‌ ಯಾ ಮಿಂಚಂಚೆಯಲ್ಲಿ ನೇರವಾಗಿ ಕಳುಹಿಸಿರಿ. ಆ ಮಾಹಿತಿಯನ್ನು ತುಂಬಿ ದಸ್ತಾವೇಜನ್ನು ನಾವು ತಯಾರಿಸಿ ಸೇರಿಸುತ್ತೇವೆ.


ಈ ಯೋಜನೆಯು ಎಲ್ಲಾ ರೀತಿಯಲ್ಲಿ ಎಲ್ಲರಿಗೂ ಸಲ್ಲುವ win-win ಸದಾವಕಾಶವಾಗಿದೆ. ಆಯಾ ಸಂಘಟನೆಯು ಈ ಕೋಶದ ಮೂಲಕ ವಿವರವಾಗಿ ಜಗಜ್ಜಾಹೀರಾದರೆ, ಯಕ್ಷಪ್ರೇಮಿಗಳಿಗೆ, ಯಕ್ಷಗಾನಕ್ಕೆ ಮುಡಿಪಾದ ಪ್ರತಿಷ್ಠಾನಗಳಿಗೆ ಹಾಗೂ ಸರಕಾರೀ ಸ್ವಾಮ್ಯದ ಒಕ್ಕೂಟಗಳಿಗೆ ಕೋಶದಲ್ಲಿನ ಮಾಹಿತಿಯು ಹೆಚ್ಚಿನ ಪ್ರಸಾರ ಮತ್ತು ಫಲಿತಾಂಶದತ್ತ ಈ ಯೋಜನೆಯು ಸಹಕರಿಸಲಿದೆ. ಇಲ್ಲಿನ ಮಾಹಿತಿಯು ಎಲ್ಲಾ ಸಂಘಟನೆಗಳ ಮಧ್ಯೆ ಸಾಂಗತ್ಯ, ಸಹಕಾರ, ಸಹಯೋಗವನ್ನು ಬೆಳೆಸುತ್ತಾ ಆರೋಗ್ಯಕರ ಪೈಪೋಟಿಯನ್ನೂ ಹೆಚ್ಚಿಸಲಿದೆ. 

ಆಯಾ ಸಂಸ್ಥೆಗಳು ತಮ್ಮದೇ ಆದ ತಾಣಗಳಲ್ಲಿ ಮಾಹಿತಿಯನ್ನು ತುಂಬುತ್ತಾ ಇಲ್ಲವೇ ಪರಿಷ್ಕರಿಸುತ್ತಾ ಹೋಗುವುದರಿಂದ ಅಂತಹ ತಾಣಗಳ ಕೊಂಡಿಯನ್ನು ನಮ್ಮ ಕೋಶದ ವಿವರವಾದ ದಸ್ತಾವೇಜಿನಲ್ಲಿ ಸೇರಿಸುವುದರ ಮೂಲಕ ಪದೇ ಪದೇ ನಮ್ಮಲ್ಲಿನ ದಸ್ತಾವೇಜನ್ನು ಪರಿಷ್ಕರಿಸುವ ಕೆಲಸ ಕಡಿಮೆ ಮಾಡಬಹುದು, ಮಾತ್ರವಲ್ಲದೇ ನಮ್ಮ ಕೋಶದ ಮೂಲಕ ಪದೇ ಪದೇ ಯಕ್ಷಪ್ರೇಮಿಗಳನ್ನು ತಮ್ಮ ಸಂಘಟನೆಗೆ ಸಂಬಂಧಿಸಿದ ತಾಣಗಳತ್ತ ಎಳೆದು ಒಯ್ಯಬಹುದಾಗಿದೆ.

ಈ ಯೋಜನೆಯ ಸುತ್ತ ನೀವು ಕೆಳಕಂಡ ರೀತಿಗಳಲ್ಲಿ ಸಹಕರಿಸಬಹುದಾಗಿದೆ.

೧. ನಿಮಗೆ ತಿಳಿದಿರುವ ಸಂಘಟನೆಗಳ ಸಂಕ್ಷಿಪ್ತ ಮಾಹಿತಿ ಒದಗಿಸಿರಿ, ವಿವರವಾದ ಮಾಹಿತಿ ಕೊಡಬಲ್ಲ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳ ಸಂಪರ್ಕ ಮಾಹಿತಿ ಒದಗಿಸಿ.

೨. ಒಂದು ಸಂಸ್ಥೆಯ ಪರವಾಗಿ ಆ ಸಂಸ್ಥೆಯ ಸಮ್ಮತಿ ಪಡೆದು, ವಿವರವಾದ ಮಾಹಿತಿಯ ದಸ್ತಾವೇಜನ್ನು ತಯಾರಿಸಿ ಕೊಡಿ ಇಲ್ಲಾ ನಾವೇ ದಸ್ತಾವೇಜು ತಯಾರಿಸಲು ಅನುಕೂಲವಾಗಲು ಸಂಬಂಧಿತ ಎಲ್ಲಾ ಮಾಹಿತಿಯನ್ನು ಬರೆದು ಕಳುಹಿಸಿ.

೩. ಈಗಾಗಲೇ ದಾಖಲಾಗಿರುವ ಸಂಘಟನೆಗಳ ಸಂಕ್ಷಿಪ್ತ ಯಾ ವಿವರವಾದ ಮಾಹಿತಿಯನ್ನು ಪರಿಷ್ಕರಿಸಲು, ದೋಷಗಳನ್ನು ಹೋಗಲಾಡಿಸಲು ಸಹಕರಿಸಿ.

೪. ಈ ಯೋಜನೆ ಮತ್ತು ಸಂಘಟನೆಗಳ ನಡುವಿನ ಸೇತುವಾಗಿ ಕೆಲಸ ಮಾಡಿ ಎಲ್ಲರೂ ಗೆಲ್ಲುವಂತೆ ಸಹಕರಿಸಿ.

೫. ಈ ಕೋಶವು ಹಾಗೂ ಸಂಬಂಧಿತ ಯೋಜನೆಯ ಪ್ರಕಟಣೆಗಳು ಯಕ್ಷಗಾನ ವಲಯದಲ್ಲಿ ಜಗಜ್ಜಾಹೀರಾಗುವತ್ತ ಪ್ರಸಾರ ಮಾಡಿ ಸಹಕರಿಸಿ.

೬. ಈ ಯೋಜನಾ ಸಮೂಹಕ್ಕೆ ಸ್ವಯಂಸೇವಕರಾಗಿ ಸೇರಿ ಸಂಬಂಧಿತ ದಸ್ತಾವೇಜು ತಯಾರಿ ಯಾ ಪರಿಷ್ಕರಣೆ ಕೆಲಸಗಳಲ್ಲಿ ಸಹಕರಿಸಿ.

೭. ಚಾರಿತ್ರಿಕವಾಗಿ ಮೆರೆದು ಹೋಗಿ ಈಗ ಇಲ್ಲವಾಗಿರುವ ಸಂಘಟನೆಗಳ ಸಂಶೋಧನೆ ಮಾಡಿ ಸಂಬಂಧಿತ ಮಾಹಿತಿ ಕೊಡಿಸಿ ಇಲ್ಲಾ ಕೊಡಬಲ್ಲ ವ್ಯಕ್ತಿಗಳ ಸಂಪರ್ಕ ಒದಗಿಸಿ.

೮. ಈ ಯೋಜನೆಯನ್ನು ಇನ್ನೂ ಉತ್ತಮ ರೀತಿಯಲ್ಲಿ  ಮುಂದುವರಿಸುವಲ್ಲಿ ನಿಮ್ಮ ಯಾವುದೇ ಸಲಹೆಗಳಿದ್ದರೆ  ನಮಗೆ ತಿಳಿಸಿ.



ಸಂಪರ್ಕ ಮಾಹಿತಿ:‌

  ದೂರವಾಣಿ / ವಾಟ್ಸ್ಯಾಪ್:‌  9880675034 (ವಸಂತಕೃಷ್ಣ ಪಟ್ಟಾಜೆ)
  ಮಿಂಚಂಚೆ: yakshasanghatanakosha@gmail.com
  ಬ್ಲಾಗ್: https://yakshasanghatanakosha.yakshavahini.com

ಧನ್ಯವಾದಗಳು!

ನಿಮ್ಮೆಲ್ಲರ ಸಹಕಾರ, ಸಹಯೋಗ ಹಾಗೂ ಶುಭಹಾರೈಕೆಗಳನ್ನು ಬಯಸುವ

- ವಸಂತಕೃಷ್ಣ ಪಟ್ಟಾಜೆ (ಯೋಜನಾ ಸಂಚಾಲಕ) ಹಾಗೂ ಯೋಜನಾ ಸಮೂಹದ ಸರ್ವ ಸದಸ್ಯರು
- ನಟರಾಜ ಉಪಾಧ್ಯ ಹಾಗೂ ಯಕ್ಷವಾಹಿನಿ ಸಂಸ್ಥೆ / ಸಮೂಹದ ಸರ್ವ ಸದಸ್ಯರು